ಗುರು 28 Oct 2013

ಇರಬೇಕೊಬ್ಬ ಇರಬೇಕು
ಗುರುವೆಂದೊಬ್ಬನು ಇರಬೇಕು
ಧೈರ್ಯವ ತುಂಬುತ ದಾರಿಯ ತೋರುತ
ಮುಂದಕೆ ದೂಡುತಲಿರಬೇಕು

ವಿನಾಯಕನ್ಮದ್ವೆ 20 Apr 2012

ವಿನಾಯಕಪ್ನೋರ್ಗ್ಮದ್ವೆ ಅಂತೆ
ಬನ್ರೀ ಹೋಗ್ಬರೋಣೆಲ್ಲ
ಹುಡ್ಗ-ಹುಡ್ಗೀಗ್ ಶುಭ ಕೋರಿ
ಊಟ ಮಾಡ್ಬರೋಣೆಲ್ಲ

ಮದ್ವೆ ಮುಗ್ಸಿ ಆಫೀಸಿಗೆ
ಬರೋ ಮೊದಲ್ನೇ ದಿನ
ವಿನಾಯಕಪ್ಪ ಮರಿಬ್ಯಾಡ್ರಿ
ನಮ್ಗ್ ಸಿಹಿ ತರೋದನ್ನ

ಮಿಡಲ್ ಕ್ಲಾಸ್ 17 Apr 2012

ಸೈಟು-ಮನೆ, ಬ್ಯಾಂಕು-ಲೋನು
ಕಾಗದ-ಪತ್ರ, ಕಾಯಿದೆ-ವಾಯಿದೆ
ನೌಕರಿ-ಚಾಕರಿ, ಕೂಲಿ-ಕಾಸು
ಮಿಡಲ್-ಕ್ಲಾಸ್ ಜನರ ಜೀವನವಾಯ್ತು

ನಾನೇ? 20 Jun 2011

ರಸ್ತೆ ದಾಟುವಾಗ ಕೈ ಹಿಡಿದು
ಜೋಕೆ ಎ೦ದವಳು ಅಮ್ಮ
ಹೆದರಬೇಡ ನೀ ನಡೆ
ಮು೦ದೆ ಎ೦ದದ್ದು ಅಪ್ಪ

ನಾನು ನಾನೇ 28 Mar 2011

ನೀ ಅರಸನ ಮಗನಾಗಿದ್ದರೂ,
ನೀ ಅರಚಿ ಕೂಗಾಡಿದರೂ,
ನಾನು ನಾನೇ ನೀನು ನೀನೆ!

ಕಿಚ್ಚು 02 Feb 2011

ನಡುರಾತ್ರಿಯ ಹಿಮದಲ್ಲಿ
ಮೈ ನಡುಗುವ ಚಳಿಯಲ್ಲಿ
ಕೊರೆಯುವ ತ೦ಗಾಳಿಯಲಿ
ಕಿಚ್ಚೆಬ್ಬಿಸಲು ನಿನ್ನ ನೆನಪೊಂದೇ ಸಾಕು

ಗೀಚಾಟ 16 Jan 2011

ಈಚೆಗೆ ಕೆಲವು ತಿಂಗಳುಗಳಿಂದ ಗೀಚಿದ ಸಾಲುಗಳಿವು. ಹಾಗೆಯೇ ಪುಸ್ತಕದ ಹಾಳೆಗಳಲ್ಲಿ ಕಳೆದುಹೋಗಿದ್ದವು. ಇ೦ದು ಮನಸ್ಸು ಮಾಡಿದ್ದೇನೆ.

೧.

ಸಾಧಿಸುವೆನೆಂದು ಹತ್ತಿಪ್ಪತ್ತು ಸಾಧನೆಗಳ
ನೀಲಿನಕ್ಷೆಯ ಬರೆಯುವಷ್ಟರಲ್ಲಿ
ಬಳಲಿ ನಿದ್ರೆ ಹೋದ

೨.

ಅಳುವ ಮುದ್ದು ಹುಡುಗಿಯ ಕಣ್ಣಂಚಿನ
ನೀರ ಹನಿಯಲಿ ತನ್ನ ಪ್ರತಿಬಿಂಬವ ಕಂಡು
ಹುಡುಗ ತಾನೂ ಅತ್ತ

೩.

ಸಾಗರಕೆ ನಾನೆ೦ದರೆ ಬಲು ಪ್ರೀತಿ
ಹತ್ತಿರ ಹೋದೊಡನೆ ಅಲೆಯ ಬೀಸಿ
ಬರಸೆಳೆದು ಅಪ್ಪಿಕೊಂಡಾಡುವನು

೪.

ಕೊರೆಯುವ ಚಳಿಯಲ್ಲೂ ಮೈ ಬಿಸಿಯಾಗಿತ್ತು,
ಗಡಗಡನೆ ನಡುಗುತಿತ್ತು,
ಇದು ಹುಡುಗಿಯ ಮುಗುಳ್ನಗೆಯಿ೦ದಾದುದಲ್ಲ
ಮೈಗೆ ತಡೆಯಲಾಗದ ಜ್ವರ ಬ೦ದಿತ್ತು

೫.

ನಿವೇದನೆ ಮಾಡಲು ನೀ ವೇದನೆ ಪಡಬೇಡ
ವಿಧೇಯತೆ ಹೇಡಿತನವಲ್ಲ

ಸುಗ್ಗಿಯ ಹುಗ್ಗಿ 15 Jan 2011

ಅಕ್ಕಿ-ಬೇಳೆ ಕಾಯಿ-ಹಾಲು
ಬೆಲ್ಲ-ನೀರು ಕುದಿಸಿ-ಬೆರೆಸಿ
ದ್ರಾಕ್ಷಿ ಜೊತೆಗೆ ಗೋಡ೦ಬಿ-ಬಾದಾಮಿ
ಎಲ್ಲ ಹುರಿದು ಬೆರೆಸಿ ನೋಡು
ಹಿಗ್ಗಿ ತಿನುವ ಹುಗ್ಗಿ ನೋಡು

ಕಡ 30 Nov 2010

ಮನಸಿನ೦ಗಳದಲಿ ಸೂರ್ಯಾಸ್ತ,
ಎತ್ತ ನೋಡಿದರೂ ಕಪ್ಪು ಕತ್ತಲು,
ಓ ಚ೦ದ್ರಮನೇ,
ಗುರಿಸೇರಬೇಕು
ಬೆಳದಿಂಗಳಿಷ್ಟು ಕಡ ಕೊಡುವೆಯಾ?

ಬೆಳಕಿನ ಸಾಲ 30 Nov 2010

ನಡುರಾತ್ರಿಯಲಿ ಪಡೆದ
ಚಂದ್ರನ ಬೆಳದಿಂಗಳ ಸಾಲವ
ತೀರಿಸುವುದಾದರು ಎಂತು?

ನನ್ನ ದೇಶ ಭಾರತ 29 Nov 2010

ನನ್ನ ದೇಶ ಭಾರತ
ಇದು ನಮ್ಮ ದೇಶ ಭಾರತ

ಸ್ವ೦ತಿಕೆಯ ತ೦ತ್ರ ಬಳಸಿ
ಸ್ವತ೦ತ್ರವಾದ ಭಾರತ

ಕುತ೦ತ್ರ ಬರದ ಸ್ವತ೦ತ್ರ ಜನರ
ಪ್ರಚ೦ಡ ದೇಶ ಭಾರತ

ವಿವಿಧ ಭಾಷೆ ವೇಷವಿರುವ
ವಿಶಾಲ ದೇಶ ಭಾರತ

ಹಸಿರೆ ತನ್ನ ಉಸಿರು ಎನುವ
ಸಂವೃದ್ಧ ದೇಶ ಭಾರತ

ನನ್ನ ದೇಶ ಭಾರತ
ಇದು ಸ್ವತ೦ತ್ರ ದೇಶ ಭಾರತ

ಯಂಗ್-ಏಜ್ 13 Oct 2010

ರಸ್ತೆಯಲ್ಲಿ ಕಣ್ಣು ಹೊಡೆದು
ಪಾರ್ಕಿನಲ್ಲಿ ಕೈಯ ಹಿಡಿದು
ಮುಗಿದೆಹೋಯ್ತು ಯಂಗ್-ಏಜ್
ಹುಡುಗಿಯ ಎ೦ಗೇಜ್-ಮೆಂಟು

ಮೌನಗಾನ 04 Oct 2010

ಮಾತು ಬರುವ ಮೂಕನಾದೆ
ಮಾತೇ ಇಲ್ಲದೆ ದಿನವ ಕಳೆದೆ
ಎಲ್ಲಿ ಹೋದಿರೆಲ್ಲ ನೀವು?

ಮೌನ ಮನವ ಚುಚ್ಚುತಿಹುದು
ನಗುವೂ ಬಾಡಿ ಹೋಗುತಿಹುದು
ಎಂದು ಬರುವಿರೆಲ್ಲ ನೀವು?

ಭಾರತ 19 Aug 2010

ಭಾರಿ ಜನರ
ಎಳೆವ ರಥವ
ಕರೆದರವರು ಭಾರತ

ಮ೦ದೇವ್ರು 07 Jul 2010

ನಿನ್ಮನೆನಲ್ಲಿಲ್ಲಾ೦ದ್ಕೊ೦ಡು ಗುಡಿಗ್ಯಾಕ್ಹೊಗ್ತೀ ಮ೦ಕೇ
ಹುಡ್ಕು ಮನ್ಸಲ್ನಿ೦ಕಾಣ್ಬೌದು ಒ೦ದೋ-ಎರಡೋ ದೇವ್ರು
ಇಲ್ಲಾ೦ತ೦ದ್ರೆ ಕತ್ತೆತ್ನೋಡು ಕಾಣ್ತಾರಪ್ಪ-ಅಮ್ಮ
ಬೇಕಾದಾಗ-ಕೂಗ್ಹಾಕ್ದಾಗ ಬರ್ತಾರಪ್ಪ-ಅಮ್ಮ
ದೇವ್ರಿಗಿ೦ತ ಇವ್ರೇ ವಾಸಿ ಬರ್ತಾರ್ಕರ್ದಾಗ್ಲೆಲ್ಲಾ
ಹೆಚ್ಚೇ ಇವ್ರು ಯಾಕ೦ತ೦ದ್ರೆ ಕೊಡ್ತಾರ್ಕೇಳಿದ್ನೆಲ್ಲಾ

ಜಾತಿ 29 Jun 2010

ಅರಿವರಿಲ್ಲ ಹೇಳ್ವರಿಲ್ಲ
ತಿಳಿಸುವವರು ಯಾರು ಇಲ್ಲ,
ಎ೦ದು ಬ೦ತು ಎ೦ತು ಬಂತು
ಜಾತಿ ನಮ್ಮ ನಡುವಲಿ?

ದಿಟ್ಟ ಮನದಿ ಜಾತಿ ದಾಟಿ
ಜ್ಯೋತಿಯೊಂದ ಕಂಡರವರು,
ಜ್ಯೋತಿಯಿಂದ ಪ೦ಜು ಉರಿಸಿ
ಮನೆಯನೇಕೆ ಸುಡುವರಿವರು?

ಪ್ರಾಣಿ ಪಕ್ಷಿಗಳಿಗೆ ಇರದ
ಜಾತಿ ಮನುಜಗೇತಕೆ?
ಜಾತಿ ಮೀರಿದಾತ ತಾನೇ
ದಾತ ಸಕಲ ಪ್ರಾಣಿಗೂ?

ಇದ್ಯಾವುದೂ ಅಲ್ಲ 03 Jan 2010

ನಡುರಾತ್ರಿಯಲ್ಲ, ಪಟಾಕಿ ಹಚ್ಚುವುದೂ ಅಲ್ಲ
ಗೆಳೆಯರೊಡಗೂಡಿ ತಿಂದು ಕುಡಿಯುವುದಲ್ಲ
ಮನೆಯಲ್ಲಿ ಮಾಡಿದ ಸಿಹಿಯೂಟವೂ ಅಲ್ಲ

ಗುರಿಯೊಂದನು ಹುಡುಕಿ ಪಟ್ಟಿಗೆ ಸೇರಿಸುವುದಲ್ಲ
ಸಿಕ್ಕವರಿಗೆಲ್ಲ ಶುಭಾಶಯವ ಹೇಳುವುದಲ್ಲ
ತಾಣಗಳಿಗೆ ಹೋಗುವುದಲ್ಲ, ವಿಶ್ರಮಿಸುವುದಲ್ಲ

ಹೊಸವರುಷವೆಂದರೆ ಇದಾವುದೂ ಅಲ್ಲ
ಇದು ಬರಿಯ ರಜಾ ದಿನವಲ್ಲ

A Special Day 15 May 2009

My dear friend,
Its a special day today
Make it worth to remember someday
Keep your smile all along the day
Make someone smile every day
My dear friend,
Its your birthday today

ಜೀವ(ನ) 15 Apr 2009

ಬಾನೆತ್ತರದ ಕಟ್ಟಡದಿ ಮಿಸುಕಾಡದೆ ಕುಳಿತಿಹುದು
ಯಂತ್ರ, ಯಾಂತ್ರಿಕರ ನಡುವೆ ಜೀವ ಕಳೆಗುಂದಿಹುದು
ಮೌಲ್ಯವಿಲ್ಲದೆ ಗುರಿಯನರಸುತ ತಾ ಸುತ್ತಿ ಬಳಲಿಹುದು
ಕಾಂಚಾಣದ ನೆರಳಿನಲಿ ಜೀವಕಾಂತಿ ಮಸುಕಾಗಿಹುದು
ವಿದ್ಯುದ್ದೀಪದಡಿ ದುಡಿಯುತ ಕಾಲ ಕಳೆಯುತಿಹುದು
ತಾನ್ ರಾಜ ದರ್ಬಾರಿನ ಮೂಲೆಯ ಕಸವಾಗಿಹುದು

ಸ್ಫೂರ್ತಿ 08 Feb 2009

ಯಾರು ದಿನವು ತರುವಳೋ
ಎನ್ನ ಮನಕೆ ಹರುಷವ
ಯಾರು ದಿಟದಿ ಕೇಳ್ವಳೋ
ಎನ್ನ ಮನದಾಕಾಂಕ್ಷೆಯಾ
ಯಾರು ಮೆಚ್ಚಿ ನಲಿವಳೋ
ಎನ್ನ ಆಯ್ಕೆ ಬಯಕೆಯ
ಅವಳೇ ನನ್ನ ಜನನಿಯು
ಜಗಕೆ ನನ್ನ ಕೊಟ್ಟಳು
ನನ್ನ ಸ್ಫೂರ್ತಿ ಚಿಲುಮೆಯು

ಪ್ರೀತಿ ಹಳೆಯದಾ? 04 Jan 2009

ನಿನ್ನೆ ಮಾಡಿದಾ ಅಡುಗೆ
ಇಂದು ಹಳೆಯದು
ನಿನ್ನೆ ನಡೆದಾ ದಾರಿ
ಇಂದು ಹಳೆಯದು
ನಿನ್ನೆ ಓದಿದಾ ಕವನ
ಇಂದು ಹಳೆಯದು
ನಿನ್ನೆ ಮಾಡಿದಾ ಪ್ರೀತಿ
ಇಂದು ಹಳೆಯದಾ?

ಅಪ್ಪ 25 Nov 2008

ಅಪ್ಪ ಅಪ್ಪ ನನ್ನ ಮುದ್ದು ಅಪ್ಪ
ನನ್ನ ಜೊತೆ ಆಟ ಆಡು ಬಾರೋ ಅಪ್ಪ
ಗೆಳೆಯರೆಲ್ಲ ನನ್ನ ಬಿಟ್ಟು ಹೋಗ್ತಾರಪ್ಪ
ನೀನೆ ಬಂದು ಒಂದು ಮಾತು ಹೇಳೋ ಅಪ್ಪ
ನಿನಗೆ ತಿಳಿದ ಆಟವೆಲ್ಲ ಕಲಿಸೋ ಅಪ್ಪ
ಗೆಳೆಯರೊಡನೆ ಆಡಿ ಗೆದ್ದು ಬರುವೇನಪ್ಪ
ಆಟ ಮುಗಿಸಿ ಬೇಗ ಬಂದು ಓದುವೆನಪ್ಪ
ಓದಿ ಬರೆದು ನಿನ್ನಂತೆಯೇ ಆಗುವೆನಪ್ಪ
ಪಾಠ ಮಾಡಿ ಮೇಷ್ಟರಾಗಿ ನಲಿಯುವೆನಪ್ಪ
ಅಪ್ಪ ಅಪ್ಪ ನನ್ನ ಮುದ್ದು ಅಪ್ಪ
ನನ್ನ ಜೊತೆ ಆಟ ಆಡು ಬಾರೋ ಅಪ್ಪ

ಹೊಸತನ 25 Nov 2008

ಬಾಳೆಂಬ ಹೆಮ್ಮರದಲಿ
ಚಿಗುರೊಡೆದಿದೆ ಹೊಸ ಆಸೆ
ಮನವೆಂಬ ಆಗಸದಲಿ
ಹೊಸದೊಂದು ಸೂರ್ಯೋದಯ

ಮೊಟ್ಟೆಯೊಡೆದ ಮರಿಗೆ
ಹೊಸತನದ ಬೆಳಕು
ಹಸಿದ ಹಕ್ಕಿಯ ಬಾಯ್ಗೆ
ಗುಟುಕಿನ ಕಾಳು

ಹಕ್ಕಿಗಳು ಹಾಡುತಲಿವೆ
ಸಾಂತ್ವನದ ಹಾಡು
ಪುಟ್ಟ ಜೀವಕೆ ಕೊಟ್ಟಿವೆ
ಆರೈಕೆಯ ಸೂರು

ಆಡುತಿವೆ ಹಕ್ಕಿಗಳು
ಒಂದಾಗಿ ಸೇರಿ
ಕಾಮನ ಬಿಲ್ಲೊಂದು
ಕಾಣುತಿದೆ ಅಲ್ಲಿ

ಹಾಡುತಲಿದೆ ಕೋಗಿಲೆಯು
ಮಾವಿನ ಚಿಗುರುಂಡು
ಗರಿಬಿಚ್ಚಿದೆ ನವಿಲು
ಸಂವೃದ್ಧಿಯಾ ಕಂಡು

ಜೀವವು ಬಂದಿದೆ ಜೀವನಕೆ
ಹೊಸತನ ಬಂದಿದೆ ಆಲೋಚನೆಗೆ

ನನ್ನ ತಾಯಿ 18 Nov 2008

ಹೊತ್ತವಳು ಹೆತ್ತವಳು ಬೆಳೆಸಿದವಳವಳು
ಕೈಯ ಹಿಡಿದು ವಿದ್ಯೆಯ ಕಲಿಸಿದವಳವಳು
ಕಥೆ ಹೇಳಿ ನೀತಿಯನು ತಿಳಿಸಿದವಳವಳು
ಸರಿ ದಾರಿಯ ತೋರಿ ನೆಡೆಸಿದವಳವಳು
ಮನುಜರೆಲ್ಲರೆ ಕೇಳಿ ನನ್ನ ತಾಯಿಯವಳು

ನೆನಪು 17 Nov 2008

ನಿನ್ನೊಡನೆ ಮಾತಾಡದ ಆ ಬರಡು ದಿನಗಳಲಿ
ನಿನ್ನ ಮೊಗತೊರದ ಆ ಬರಡು ಚಿತ್ರಗಳಲಿ
ನಿನ್ನ ದನಿತಾರದ ಆ ಬಿರುಗಾಳಿಯಲಿ
ಪ್ರೀತಿಯ ಚಿಗುರಿಗೆ ನೀರಾಗಿರುವುದೇ ನಿನ್ನ ನೆನಪು