ಗೀಚಾಟ

ಈಚೆಗೆ ಕೆಲವು ತಿಂಗಳುಗಳಿಂದ ಗೀಚಿದ ಸಾಲುಗಳಿವು. ಹಾಗೆಯೇ ಪುಸ್ತಕದ ಹಾಳೆಗಳಲ್ಲಿ ಕಳೆದುಹೋಗಿದ್ದವು. ಇ೦ದು ಮನಸ್ಸು ಮಾಡಿದ್ದೇನೆ.

೧.

ಸಾಧಿಸುವೆನೆಂದು ಹತ್ತಿಪ್ಪತ್ತು ಸಾಧನೆಗಳ
ನೀಲಿನಕ್ಷೆಯ ಬರೆಯುವಷ್ಟರಲ್ಲಿ
ಬಳಲಿ ನಿದ್ರೆ ಹೋದ

೨.

ಅಳುವ ಮುದ್ದು ಹುಡುಗಿಯ ಕಣ್ಣಂಚಿನ
ನೀರ ಹನಿಯಲಿ ತನ್ನ ಪ್ರತಿಬಿಂಬವ ಕಂಡು
ಹುಡುಗ ತಾನೂ ಅತ್ತ

೩.

ಸಾಗರಕೆ ನಾನೆ೦ದರೆ ಬಲು ಪ್ರೀತಿ
ಹತ್ತಿರ ಹೋದೊಡನೆ ಅಲೆಯ ಬೀಸಿ
ಬರಸೆಳೆದು ಅಪ್ಪಿಕೊಂಡಾಡುವನು

೪.

ಕೊರೆಯುವ ಚಳಿಯಲ್ಲೂ ಮೈ ಬಿಸಿಯಾಗಿತ್ತು,
ಗಡಗಡನೆ ನಡುಗುತಿತ್ತು,
ಇದು ಹುಡುಗಿಯ ಮುಗುಳ್ನಗೆಯಿ೦ದಾದುದಲ್ಲ
ಮೈಗೆ ತಡೆಯಲಾಗದ ಜ್ವರ ಬ೦ದಿತ್ತು

೫.

ನಿವೇದನೆ ಮಾಡಲು ನೀ ವೇದನೆ ಪಡಬೇಡ
ವಿಧೇಯತೆ ಹೇಡಿತನವಲ್ಲ