ವಿನಾಯಕನ್ಮದ್ವೆ

ಸಹೋದ್ಯೋಗಿಯೋಬ್ಬರ ಮದುವೆಯ ಕರೆಯೋಲೆ ನೋಡಿದಾಗ ಅನ್ನಿಸಿದ್ದು ಹೀಗೆ

ವಿನಾಯಕಪ್ನೋರ್ಗ್ಮದ್ವೆ ಅಂತೆ
ಬನ್ರೀ ಹೋಗ್ಬರೋಣೆಲ್ಲ
ಹುಡ್ಗ-ಹುಡ್ಗೀಗ್ ಶುಭ ಕೋರಿ
ಊಟ ಮಾಡ್ಬರೋಣೆಲ್ಲ

ಮದ್ವೆ ಮುಗ್ಸಿ ಆಫೀಸಿಗೆ
ಬರೋ ಮೊದಲ್ನೇ ದಿನ
ವಿನಾಯಕಪ್ಪ ಮರಿಬ್ಯಾಡ್ರಿ
ನಮ್ಗ್ ಸಿಹಿ ತರೋದನ್ನ